ಕಥೆಗೆ ಮೊದಲು




ಇಲ್ಲಿ ಬರೋ ಕಥೆಗಳ ಬಗ್ಗೆ, ಪಾತ್ರಗಳ ಬಗ್ಗೆ, ಸ್ಥಳಗಳ ಬಗ್ಗೆ ಮೊದಲೇ ಹೇಳಿ ಬಿಡೊದು ಕ್ಷೇಮ. ಇಲ್ಲಿ ಸತ್ಯ ಘಟನೆಗಳಿಂದ ಪ್ರೇರಿತ ಕತೆಗಳಿವೆ, ಕಾಲ್ಪನಿಕ ಕತೆಗಳಿವೆ, ಕಲ್ಪನೆಗೆ ಮೀರಿದ ಕತೆಗಳೂ ಇವೆ.

ನಮ್ಮ ದೇಶದ ವೈಶಿಷ್ಟ್ಯತೆಯೇ ಹೀಗೆ, ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಹೆಜ್ಜೆ ಹೆಜ್ಜೆಗೂ ಬದಲಾಗುವ ಸಂಸ್ಕೃತಿ, ಭಾಷೆ, ಆಚರಣೆಗಳು, ಸಂಪ್ರದಾಯಗಳು. ನಮ್ಮಲ್ಲಿನ ಪೂಜಾರಾಧನೆಯನ್ನೆ ಗಮನಿಸಿ, ಅವರವರ ಸಂಸ್ಕೃತಿಯ ಹಾಗೆ ಅವರವರು ಪೂಜಿಸುವ  ದೇವರುಗಳು. ದೇವರ ಮೂರ್ತಿಗಳು ಇಲ್ಲಿ ಇದ್ದ ಹಾಗೆ ತಮಿಳುನಾಡಿನಲ್ಲಿ ಇರುವುದಿಲ್ಲ, ತಮಿಳುನಾಡಿನ ಹಾಗೆ ಒಡಿಸ್ಸಾದಲ್ಲಿ ಇರೋದಿಲ್ಲ, ಒಡಿಸ್ಸಾದಲ್ಲಿ ಇರೋ ಹಾಗೆ ಬಂಗಾಳದಲ್ಲಿ ಇರೋದಿಲ್ಲ. ಹೀಗಿರೊವಾಗ ಮನುಷ್ಯನ ಆಲೊಚನೆಯನ್ನ ಒಂದು ಸ್ಥಳಕ್ಕೆ ನಿಗದಿಪಡಿಸೋದು ಹೇಗೆ ? ಒಂದು ಪರಿಸರದ ಸಂಪ್ರದಾಯದಲ್ಲಿ ಚಿತ್ರಿಸೋದು ಹೇಗೆ?

ಈ ಕಾರಣಕ್ಕಾಗಿಯೆ ನಾನು ನನ್ನದೇ ಆದ ಊರನ್ನ ಸೃಷ್ಟಿ ಮಾಡ್ತಾ ಇದ್ದೀನಿ. ನನ್ನ ಕಲ್ಪನೆಯ ಪಾತ್ರಗಳು ಜೀವಂತವಾಗಿರುವ ಊರು, ನನ್ನ ಕಥೆಗಳಂತೆ ನಡೆಯುವ ನಿತ್ಯ ಜೀವನ ವೃತ್ತಾಂತ. ಇದೇ ಆ ಊರು “ಮಂಜಿನ ಕೊಪ್ಪ” 

ಹೌದು ಈ ಉರಿನಲ್ಲಿ ಎಲ್ಲಾ ರೀತಿಯ ಜನಗಳೂ ಇದ್ದಾರೆ, ಎಲ್ಲಾ ರೀತಿಯ ಸಮಸ್ಯೆಗಳೂ ಇವೆ, ಹಾಗೆಯೇ ನೆಮ್ಮದಿಯ ಬದುಕೂ ಇದೆ. “ಫಾಲ್ಗುಣ” ರಾಜ ವಂಶ ಆಳಿದ ಇತಿಹಾಸವಿದೆ, ಅಳಿದುಳಿದ ಕೋಟೆ ಕೊತ್ತಲವಿದೆ, ಜೀವ ನದಿ “ಕಲಾಧರೆ” ತನ್ನನ್ನ ನಂಬಿದ ಊರನ್ನ ಕಾಪಾಡುತ್ತಿದಾಳೆ. ಫಾಲ್ಗುಣೇಶ್ವರನಾಗಿ ಆ ಮಹಾದೇವ ಜನರ ಕಷ್ಟಗಳಿಗೆ ಓಗೊಡುತ್ತಿದ್ದಾನೆ

ಬನ್ನಿ ನನ್ನ ಜೊತೆ,
“ಮಂಜಿನ ಕೊಪ್ಪ”ಕ್ಕೆ ನಿಮಗೂ ಸ್ವಾಗತ


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ