First Shot


ಕಥೆಗಳು ಬರಹಗಾರನ ಕಲ್ಪನೆಯ ಕೂಸು ಅನ್ನೊದು ಒಂದು ಮಾತಿನ ಪ್ರಕಾರ ನಿಜ. ಇನ್ನೊದು ರೀತಿ ಹೇಳೊದಾದ್ರೆ ಸ್ವಲ್ಪ ನಿಜ ಸ್ವಲ್ಪ ಸುಳ್ಳು. ಹೌದು ನಾನು ಹೇಳೊದಾದ್ರೆ ಕಥೆ ಅನ್ನೊದು ಒಂದು ಬದುಕಿನ ಅನುಭವ. ಬರಹಗಾರನಾಗಿ ಒಂದು ವಿಷಯದ ಬಗ್ಗೆ ಅವನ ಯೋಚನೆಗಳು, ಅಭಿಪ್ರಾಯಗಳು ಮತ್ತು ಅವನ ಕಲ್ಪನೆಗಳು. ಇವುಗಳ ಅರ್ಥಪೂರ್ಣ ಸಮಾಗಮ ಒಂದು ಪರಿಪೂರ್ಣ ಕಥೆ.

‘ನಾನು ಮತ್ತು ಕಥೆ’ ಯಲ್ಲಿ ನಾನು ಪ್ರಕಟಪಡಿಸಿರೋದು ಈಗಿನ ಸಮಾಜದ ಆಗು ಹೋಗುಗಳ ಮರು ಚಿತ್ರಣವಷ್ಟೆ. ಜನರ ಯೊಚನೆಗಳು, ಅರ್ಥ ಹೀನ ನಿರ್ಧಾರಗಳನ್ನ ಹುಟ್ಟುಹಾಕುವ ಅವರ ಜೀವನದ ಘಟನೆಗಳು, ನೀರಸವಾಗುತ್ತಿರುವ ಮಾನವ ಸಂಬಂಧಗಳು… 

ಈ ಮುನ್ನುಡಿ ಭಾಗವನ್ನು ಬರೆಯೋಕೆ ಕುಳಿತ ನನಗೆ ಗೊಂದಲವಾಗಿದ್ದಂತು ನಿಜ. ಕಾರಣ ನಾನು ಬರೆಯೋಕೆ ಹೊರಟಿರೋದು ಒಂದು ನಿರ್ದಿಷ್ಟ ವಿಷಯಕ್ಕೆ ಸಂಬಂಧಪಟ್ಟದ್ದಲ್ಲ. ಇಲ್ಲಿ ಎಲ್ಲವು ಇರಬಹುದು, ಏನೂ ಇಲ್ಲದೆಯೂ ಇರಬಹುದು. ಮನುಷ್ಯನ ಆಲೊಚನಾ ಲಹರಿ, ಮನಸ್ಸಿನ ಭಾವನೆಗಳನ್ನ, ಪ್ರೀತಿ ಪ್ರೇಮದ ಒಲವನ್ನ, ಹುಚ್ಚು ಮನಸ್ಸಿನ್ನ ಮುಖಗಳನ್ನ ನನ್ನದೇ ರೀತಿಯಲ್ಲಿ ಚಿತ್ರಿಸೋದಕ್ಕೆ ಪ್ರಯತ್ನ ಪಟ್ಟಿದೀನಿ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ